ಗೋರಿ ತಂಡವು ನೂತನ ನಾಯಕನಾಗಿ ರಿಯಾಜ್ ಗೋರಿ ಅವರನ್ನು ಘೋಷಿಸಿರುವುದು ಕ್ರೀಡಾಸಕ್ತರಲ್ಲಿ ಅಪಾರ ಸಂತೋಷ ತಂದಿದೆ. ರಿಯಾಜ್ ಗೋರಿ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವುದರ ಜೊತೆಗೆ, ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತ ಆಟಗಾರ. ಅವರ ಶ್ರೇಷ್ಠ ಆಡಿತಂತ್ರ, ತೀರ್ಮಾನ ಸಾಮರ್ಥ್ಯ ಮತ್ತು ತಂಡವನ್ನು ಮುನ್ನಡೆಸುವ ಮನೋಭಾವವು ಅವರನ್ನು ನಾಯಕನ ಸ್ಥಾನಕ್ಕೆ ತರುವಂತೆ ಮಾಡಿದೆ.
ಅವರ ಅನುಭವ ಮತ್ತು ಅಭಿಮಾನಿಗಳ ನಂಬಿಕೆಯಿಂದ, ರಿಯಾಜ್ ಗೋರಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುವಲ್ಲಿ ಮುಖ್ಯ ಪಾತ್ರವಹಿಸುವ ವಿಶ್ವಾಸವಿದೆ. ಫಯಾಜ್ ಅಡ್ದೂರು ಉಪನಾಯಕನಾಗಿ ಬಲಿಷ್ಠ ಸಾಥ್ ನೀಡುವುದರಿಂದ ತಂಡದ ಬಲವರ್ಧನೆ ಮತ್ತಷ್ಟು ಉಕ್ಕಿದೆ.
ಹೊಸದಾಗಿ ಅನಾವರಣಗೊಂಡ ಜರ್ಸಿಯೊಂದಿಗೆ, ಈ ನಾಯಕನೊಂದಿಗೆ ಗೋರಿ ತಂಡವು ಮುಂಬರುವ ಪಂದ್ಯಗಳಲ್ಲಿ ಪ್ರಭಾವಶಾಲೀ ಪ್ರದರ್ಶನ ನೀಡಲು ಸಜ್ಜಾಗಿದೆ. ತಂಡದ ಅಭಿಮಾನಿಗಳು ತಮ್ಮ ನಾಯಕನ ಈ ಹೊಸಯಾತ್ರೆಗೆ ಬೆಂಬಲ ನೀಡುವಲ್ಲಿ ಹಿಂದೇಟು ಹಾಕುವುದಿಲ್ಲ.
ರಿಯಾಜ್ ಗೋರಿ ಅವರ ಈ ನಾಯಕತ್ವಕ್ಕೆ ಮತ್ತು ತಂಡದ ಯಶಸ್ಸಿಗೆ ಶುಭ ಹಾರೈಕೆಗಳು!





Leave a Reply